ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಶೇರುದಾರರಾಗಿರುವ ರೈತರಿಗೆ ಇನ್ನು ಒಂದು ವಾರದ ಒಳಗಾಗಿ ಸಾಲ ಮಂಜೂರು ಮಾಡಬೇಕಾಗಿ ಜಿಲ್ಲಾ ಸಹಕಾರ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನೋದ್ ಕುಮಾರ್ ರವರಿಗೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರ್

Bangarappa c journalist
Bangarappa c journalist - Journalist
2 Min Read

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಶೇರುದಾರರಾಗಿರುವ ರೈತರಿಗೆ ಇನ್ನು ಒಂದು ವಾರದ ಒಳಗಾಗಿ ಸಾಲ ಮಂಜೂರು ಮಾಡಬೇಕಾಗಿ ಜಿಲ್ಲಾ ಸಹಕಾರ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿನೋದ್ ಕುಮಾರ್ ರವರಿಗೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ ಮರಂಕಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ನಗರ ಅಧ್ಯಕ್ಷರಾದ ಧನಂಜಯ ಕಿರಿಜಾಜಿ ರವರು ಮನವಿ ಪತ್ರ ಸಲ್ಲಿಸಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತರುವಂತೆ ಕೋರಲಾಯಿತು.

ಈ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷರಾದ ಹೊಸೂರ್ ಕುಮಾರ್ ಅವರು ಮಾತನಾಡಿ
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಮಂಜೂರು ಮಾಡುವಂತೆ ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿಕೊಟ್ಟ ಮೇರೆಗೆ ಸಮಯಾವಕಾಶ ಕೋರಿದ್ದರು. ಆದರೆ ಇದುವರೆಗೂ ಕ್ರಮ ಕೈಗೊಳ್ಳದ ಕಾರಣ ಇಂದು ಮನವಿ ಪತ್ರ ಸಲ್ಲಿಸಲಾಗಿದೆ.

ತಾಲ್ಲೂಕಿನ ಹನಗೋಡು ಕೃಷಿ ಪತ್ತಿನ ಸಹಕಾರ ಸಂಘವು ಸುಮಾರು 145 ಜನ ರೈತರು ಕಳೆದ 2 ವರ್ಷಗಳಲ್ಲಿ ಬ್ಯಾಂಕಿಗೆ ಹಣ ಜಮಾ ಮಾಡಿದ್ದು, ಇವರುಗಳಿಗೆ ಸಾಲ ಕೊಡದೆ ಅತಂತ್ರವಾಗಿರುತ್ತದೆ. ಅದರಂತೆ ಕೆಲವು ಇನ್ನುಳಿದ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಈ ಸಮಸ್ಯೆಗಳು ಹಾಗೆಯೇ ಮುಂದುವರೆದಿರುತ್ತದೆ. ಇದರಿಂದಾಗಿ ರೈತರು ಬಡ್ಡಿರಹಿತವಾದ ಸಾಲ ಪಡೆಯುವಲ್ಲಿ ವಂಚಿತರಾಗಿರುವುದಲ್ಲದೇ ಬೇರೆ ಬ್ಯಾಂಕಿನಲ್ಲಿಯೂ ಸಹ ಸಾಲ ಸೌಲಭ್ಯಗಳು ದೊರಕದೆ ಕಂಗಾಲಾಗಿರುತ್ತಾರೆ. ಆದ್ದರಿಂದ ತಾಲ್ಲೂಕಿನ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳ ಬಗ್ಗೆ ಅಕ್ರಮದಲ್ಲಿ ಭಾಗಿಯಾಗಿರುವವರ ಮೇಲೆ ಶಿಸ್ತು ಕ್ರಮ ತೆಗೆದುಕೊಂಡು ಇನ್ನು ಒಂದು ವಾರದ ಒಳಗಾಗಿ ರೈತರಿಗೆ ಸಾಲ ವಿತರಣೆ ಮಾಡುವ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.

ಒಂದು ವಾರದ ಒಳಗಾಗಿ ಸಾಲ ಸೌಲಭ್ಯ ವಿತರಣೆ ಮಾಡದಿದ್ದಲ್ಲಿ ರಾಜ್ಯ ರೈತ ಸಂಘವು ಮುಂದಿನ ದಿನಗಳಲ್ಲಿ ರೈತರಿಗೆ ತೊಂದರೆಯನ್ನು ನಿವಾರಣೆ ಮಾಡಲು ಗಂಭೀರವಾದ ಹೋರಾಟಗಳನ್ನು ಹಮ್ಮಿಕೊಳ್ಳಲು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹನಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ರೈತರುಗಳಾದ ಹೊಂಬೆಗೌಡ, ಸಿ ಎನ್ ನಾಗರಾಜು, ಅಲೆಕ್ಸ್ ಲೋಕೇಶ್, ಜಿ ಆರ್ ನಾಗರಾಜು ಮಂಜುನಾಥ್, ಸುಬ್ರಮಣಿ, ಸಂತೋಷ್ ಮುಂತಾದವರು ಹಾಜರಿದ್ದರು.

Share This Article