ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ ಶಾಸಕ ಎಂ ಆರ್ ಮಂಜುನಾಥ್ .•
ಹನೂರು :ಪಟ್ಟಣದ ಆರ್ ಎಸ್ ದೊಡ್ಡಿಯಲ್ಲಿ ನಿರ್ಮಿಸಲಾಗುತ್ತಿರುವ ಕನಕ ಸಮುದಾಯ ಭವನ ಅಥವಾ ಕಲ್ಯಾಣ ಮಂಟಪದ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡೋಣವೆಂದು ಶಾಸಕ ಎಮ್ ಆರ್ ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಕನಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಹನೂರು ತಾಲ್ಲೂಕು ಕುರುಬರ ಸಂಘ ಹಾಗೂ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹಾಗಮಿಸಿ ಮಾತನಾಡಿದ ಅವರು
ಪೋಷಕರು ಶಾಲಾ ಚಿಕ್ಕ ಕಾರ್ಯಕ್ರಮದ ಹಿಂದೆ ಒಂದು ದೊಡ್ಡ ಉದ್ದೇಶವಿರುತ್ತದೆ ಸಮಾಜದ ಹತ್ತನೆ ತರಗತಿ ಪಿಯುಸಿ ಮಕ್ಕಳ ಭಾಗವಹಿಸುವಿಕೆಯಿಂದ ಕಾರ್ಯಕ್ರಮದ ಮೆರಗು ಹೆಚ್ಚುತ್ತದೆ ಅಲ್ಲದೆ ಮುಂದಿನ ಪೀಳಿಗೆ ಮಕ್ಕಳಿಗೆ ಮಾಧರಿಯಾಗುತ್ತದೆ ಸಮಾಜದ ಏಳು ಬೀಳುಗಳನ್ನು ತಿಳಿಸಿದಂತಾಗುತ್ತದೆ , ಪ್ರತುಭಾ ಪುರಸ್ಕಾರ ಕಾರ್ಯಕ್ರಮವು ಕೇವಲ ಬೆರಳೆಣಿಕೆ ಜನ ಸೇರಬಾರದು ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪವಂತಾಗಬೇಕು .
ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಿದ ಎಲ್ಲಾರು ಮುಂದಿನ ದಿನಗಳಲ್ಲಿ ಅವರ ಗುರಿಮುಟ್ಟಲು ನಮ್ಮ ಸಹಕಾರ ಇದ್ದೆಇರುತ್ತದೆ. ನಿಮ್ಮ ತಂದೆ ತಾಯಿಯ ಜವಾಬ್ದಾರಿಯನ್ನು ಸಂಪೂರ್ಣ ವಹಿಸಿಕೊಂಡು ಹೆಚ್ಚಿನ ಸಾಧನೆ ಮಾಡಿದರೆ ಅವರಿಗೆ ನೀವು ಸಲ್ಲಿಸುವ ಗೌರವ ವಾಗುತ್ತದೆ , ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಯುಗವಾಗಿದೆ ಕೇವಲ ಪಠ್ಯ ಸಂದೇಶಗಳನ್ನು ಮಾತ್ರ ತಿಳಿಯದೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಸೃಜನಶೀಲ ವಲಯದಲ್ಲಿ ಗುರುತಿಸಿಕೊಳ್ಳಬೇಕು . ಪ್ರತಿ ವರ್ಷವು ಬಹಳ ದೊಡ್ಡ ಮಟ್ಟದಲ್ಲಿ ಭಾಗವಹಿಸಿ ಕಾರ್ಯಕ್ರಮದ ಜೊತೆಯಲ್ಲಿ ಹಿರಿಯರ ಸಮಾಗಮ ,ಕಲೆ ಸಂಸ್ಕೃತಿಗಳ ಅನಾವರಣ ಮಾಡಬೇಕು , ಕಲ್ಯಾಣ ಮಂಟಪದ ದಿನಾಂಕವನ್ನು ಕನಕ ಜಯಂತಿಯ ಸಮಯದಲ್ಲಿ ಅದ್ದೂರಿಯಾಗಿ ಮಾಡೋಣ ,
ಇದೇ ಸಂದರ್ಭದಲ್ಲಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ಶಿವಪ್ಪ, ವೆಂಕಟೇಗೌಡ, ನಾಗರಾಜು,ಉಪಾಧ್ಯಕ್ಷ ಮಲ್ಲಣ್ಣ, ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ, ಮುಖ್ಯ ಅತಿಥಿಗಳಾದ ಬಸವರಾಜು, ನಾಗರಾಜು, ಹುಚ್ಚಯ್ಯ, ಪುಟ್ಟಸ್ವಾಮಿ, ರಾಜು, ನಂಜುಂಡಗೌಡ, ಮಧು, ತಾಲ್ಲೂಕು ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು,ಮುಖಂಡರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
