ಜನರ ಸೇವೆಯೇ ನನ್ನ ಜೀವನದ ಮೂಲ ಗುರಿಯಾಗಿದೆ: ಸಮಾಜ ಸೇವಕ ಬಿಬಿಆರ್ ಬಾಬಣ್ಣ ನರೇಂದ್ರಬಾಬು

Bangarappa c journalist
Bangarappa c journalist - Journalist
2 Min Read

ಜನರ ಸೇವೆಯೇ ನನ್ನ ಜೀವನದ ಮೂಲ ಗುರಿಯಾಗಿದೆ: ಸಮಾಜ ಸೇವಕ ಬಿಬಿಆರ್ ಬಾಬಣ್ಣ ನರೇಂದ್ರಬಾಬು

 

2028 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ : ಬಿಬಿಆರ್ ಬಾಬಣ್ಣ

ಪಿರಿಯಾಪಟ್ಟಣ. ಜನರ ಸೇವೆಯೇ ನನ್ನ ಜೀವನದ ಮೂಲ ಗುರಿಯಾಗಿದೆ ಎಂದು ಸಮಾಜ ಸೇವಕ ಬಿಬಿಆರ್ ಬಾಬಣ್ಣ ನರೇಂದ್ರಬಾಬು ಹೇಳಿದರು.
ಪಟ್ಟಣದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಿರಿಯಪಟ್ಟಣ ತಾಲೂಕಿನ ಜನತೆ ನನ್ನ ಆಶಾಕಿರಣರಾಗಿದ್ದಾರೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ನನ್ನ ಮೂಲ ಮಂತ್ರವಾಗಿರುತ್ತದೆ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು ನನ್ನ ಪ್ರಥಮ ಆದ್ಯತೆಯಾಗಿದೆ ಜನರಿಗೆ ಮೂಲ ಸೌಕರ್ಯ ದೊರಕಿಸಿಕೊಡದ ಹೊರತು ಯಾವುದೇ ಹಳ್ಳಿ ಅಭಿವೃದ್ಧಿ ಸಾಧ್ಯವಿಲ್ಲ ಕುಡಿಯುವ ನೀರು, ರಸ್ತೆ ಚರಂಡಿ ವ್ಯವಸ್ಥೆ, ವಿದ್ಯುತ್ ಸಂಪರ್ಕ ಜನಸಾಮಾನ್ಯರಿಗೆ ಅತ್ಯಮೂಲ್ಯವಾದ ಸೌಲಭ್ಯವಾಗಿದೆ ಇದನ್ನು ಸಮರ್ಪಕವಾಗಿ ಜನರಿಗೆ ತಲುಪಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಯಾವುದೇ ಮೂಲಭೂತ ಸೌಕರ್ಯ ಕೊರತೆ ಕಂಡುಬಂದಲ್ಲಿ ತಕ್ಷಣ ನನಗೆ ತಿಳಿಸಿ ಪಿರಿಯಾಪಟ್ಟಣ ಜನತೆ ಬಹಳ ಒಳ್ಳೆಯ ಸಹೃದಯವಂತರು ಇವರ ಹೃದಯ ಶ್ರೀಮಂತಿಕೆಯಿಂದ ನನ್ನ ಮನಸ್ಸು ನಿಮ್ಮ ಪ್ರೀತಿಯನ್ನು ಬಯಸುತ್ತದೆ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ ನಿಮ್ಮ ಆಶೀರ್ವಾದ ಒಂದಿದ್ದರೆ ಸಾಕು ಹಿಂದುಳಿದ ವರ್ಗಗಳು ಒಂದಾಗಬೇಕಾಗಿದೆ ಆ ಮೂಲಕ ಪಿರಿಯಾಪಟ್ಟಣ ತಾಲೂಕನ್ನು ಹಿಂದುಳಿದ ವರ್ಗದ ಒಬ್ಬ ಜನನಾಯಕನನ್ನು ಶಾಸಕನನ್ನಾಗಿ ಮಾಡಿಕೊಳ್ಳಬಹುದಾಗಿದೆ. ಈ ಒಂದು ಉದ್ದೇಶ ಇಟ್ಟುಕೊಂಡು ನಾವು ಈ ದಿನ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇನೆ ನನ್ನ ಕೆಲಸಕ್ಕೆ ಅನೇಕ ಯುವಕರು ಮುಂದೆ ಬಂದು ನನ್ನ ಸಂಘಟನೆಗೆ ಸೇರಿಕೊಳ್ಳುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ ಆಗಿದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಎಲ್ಲಾ ವರ್ಗದ ಮುಖಂಡರನ್ನು ಒಗ್ಗೂಡಿಸುವ ಕೆಲಸವಾಗಬೇಕಾಗಿದೆ. ನನಗೆ ಹಿಂದಿನ ಚರಿತ್ರೆಗಳು ಬೇಡ ಮುಂದೆ ಆಗಬೇಕಾದ ಉತ್ತಮ ಕೆಲಸದ ಬಗ್ಗೆ ನಾವು ಗಮನ ಹರಿಸೋಣ ಆ ಮುಖಾಂತರ ಒಳ್ಳೆಯ ವೇದಿಕೆ ನಿರ್ಮಾಣ ಮಾಡೋಣ ಮತ್ತು ಪಿರಿಯಾಪಟ್ಟಣ ಜನತೆ ಹೊಸಮುಖ ಬಯಸುತ್ತಿದ್ದು ತಾಲೂಕಿನಲ್ಲಿ ಜನರು ನನ್ನನ್ನು ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡಮಾಡಿದ್ದಾರೆ ನಿಮ್ಮ ಅಭಿಮಾನಕ್ಕೆ ಬದ್ಧನಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೇನೆ ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲ ಸಂಘಟಿತರಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅರುಣ್, ಕೃಷ್ಣ ಸೇರಿದಂತೆ ಬಿಬಿಆರ್ ಬಾಬಣ್ಣರವರ ಅಭಿಮಾನಿಗಳು ಇದ್ದರು.

Share This Article