ಬಡಾವಣೆಗಳ ಮರು ಅಭಿವೃದ್ದಿಗೆ ನ.9ರಂದು ಚಾಲನೆ – ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ 

Bangarappa c journalist
Bangarappa c journalist - Journalist
1 Min Read

ಬಡಾವಣೆಗಳ ಮರು ಅಭಿವೃದ್ದಿಗೆ ನ.9ರಂದು ಚಾಲನೆ – ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ 

 

ರಾಮನಗರ :
ನೆನೆಗುದಿಗೆ ಬಿದ್ದಿರುವ ಬಡಾವಣೆಗಳನ್ನು 37.13 ಕೋಟಿ ರೂ ವೆಚ್ಚದಲ್ಲಿ ಮರು ಅಭಿವೃದ್ಧಿ ಪಡಿಸಲಾಗುತ್ತಿದ್ದು ನ.9 ರಂದು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಹೇಳಿದರು.

ನಗರದ ಪ್ರಾಧಿಕಾರದ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ‌ ಅಧ್ಯಕ್ಷತೆಯಲ್ಲಿ ಜೀಗೇನಹಳ್ಳಿ ಅರ್ಕಾವತಿ ಬಡಾವಣೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಹದಿನೈದು ವರ್ಷಗಳ ಹಿಂದೆ‌ ನಿವೇಶನ‌ ಖರೀದಿ ಮಾಡಿರುವ
652 ನಿವೇಶನದಾರರಿಗೆ ಇದು ಪ್ರಯೋಜನವಾಗಲಿದೆ ಎಂದು ಹೇಳಿದರು.

ನೆನೆಗುದಿಗೆ ಬಿದ್ದ ಬಡಾವಣೆಗಳ ಅಭಿವೃದ್ಧಿ ಪಡಿಸಲು ಮಾಜಿ ಸಂಸದ ಡಿ.ಕೆ.ಸುರೇಶ್ ಹೆಚ್ಚಿನ ಕಾಳಜಿ ವಹಿಸಿದ್ದರು. ಇದರಿಂದಾಗಿ ಇಂದು ಮೂರು ಬಡಾವಣೆಗಳ 1661 ನಿವೇಶನದಾರರ ಗೃಹ ನಿರ್ಮಾಣ ಮಾಡುವ ಕನಸು ನನಸಾಗಿದೆ. ಈ ಪವಿತ್ರ ಕೆಲಸ ಎಲ್ಲಾ ಕೃತಜ್ಞತೆಯು ಮಾಜಿ ಸಂಸದ‌ ಡಿ.ಕೆ.ಸುರೇಶ್ ಹಾಗೂ ಶಾಸಕ‌ ಇಕ್ಬಾಲ್ ಹುಸೇನ್ ಅವರಿಗೆ ಸಲ್ಲುತ್ತದೆ ಎಂದರು.

ಈಗಾಗಲೆ ಅರ್ಚಕರಹಳ್ಳಿ ಹೆಲ್ತ್ ಸಿಟಿ ಬಡಾವಣೆಯಲ್ಲಿ 2.98 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಕಣ್ವ ಬಡಾವಣೆಯನ್ನು 18.63 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಾಧಿಕಾರ ವ್ಯಾಪ್ತಿಯ ಒಟ್ಟು ಮೂರು ಬಡಾವಣೆಗಳಲ್ಲಿ 1661 ನಿವೇಶನಗಳ ಮಾಲೀಕರಿದ್ದು, ಇವರಲ್ಲಿ 1436 ನಿವೇಶನದಾರರು ಅಭಿವೃದ್ಧಿ ಶುಲ್ಕ ಪಾವತಿಸಿದ್ದು, 225 ಜನ ಹಣ ಪಾವತಿ ಮಾಡಬೇಕಾಗಿದ್ದು ಇವರುಗಳು ಕೂಡಲೆ ಹಣ ಪಾವತಿಸಿದಲ್ಲಿ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದರು.

ಪ್ರಾಧಿಕಾರದ ನಿರ್ದೇಶಕರದ ಬೈರೇಗೌಡ, ಶ್ರೀನಿವಾಸ್, ಶ್ರೀದೇವಿ, ಅಭಿಯಂತರ ಶ್ರೀವತ್ಸ ಇದ್ದರು.

Share This Article