ನಾಡಪ್ರಭು ಕೆಂಪೇಗೌಡರ ಸ್ಮರಣೋತ್ಸವಕ್ಕೆ ಹನ್ನೊಂದು ವರ್ಷಗಳು:-
ನವೆಂಬರ್ ಹದಿನೈದು 2015 ಇತಿಹಾಸದ ಪುಟಗಳಲ್ಲಿ ಸೇರುವ ಈ ದಿನ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಸ್ಮರಣೋತ್ಸವ ನಿರೀಕ್ಷೆ ಮೀರಿ ಯಶಸ್ಸು ಪಡೆದ ದಿನವದು ರಾಜ್ಯದಲ್ಲಿ ನಂತರ ನಡೆದ ಹಲವು ಸಮುದಾಯದ ಕಾರ್ಯಕ್ರಮಗಳಲ್ಲಿ ಮೈಸೂರು ಕಾರ್ಯಕ್ರಮದ ಉದಾಹರಣೆ ಕೊಟ್ಟು ಹೇಳಿದ ಕಾರ್ಯಕ್ರಮವದು ಇಂದಿಗೆ 8 ವರ್ಷ.
ಮೇ 19 ರ ಮೊದಲ ಸಭೆಯಿಂದ ನವೆಂಬರ್ 15 ರ ಕಾರ್ಯಕ್ರಮದ ದಿನದವರೆಗೆ ನಡೆದ ಕೆಲವು ಅಂಶಗಳನ್ನು ಚಿತ್ರ ಸಹಿತ ತಮ್ಮ ಮುಂದಿಡುವ ಸಣ್ಣ ಪ್ರಯತ್ನವಿದು..
2013 ರಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ರಾಷ್ಟ್ರೀಯ ಉತ್ಸವದ ಪ್ರೇರಣೆ ಮೊದಲ ಹೆಜ್ಜೆಯಾದರೆ
ಈ ಕಾರ್ಯಕ್ರಮಕ್ಕಾಗಿ ಮೊದಲ ಆದೇಶ ಬಂದದ್ದು ಪೂಜ್ಯ ಶ್ರೀಗಳಿಂದ ಕೋಲಾರದಲ್ಲಿ ನಡೆದ ಕೆಂಪೇಗೌಡರ ಜಯಂತಿ ನಂತರ ಕೆಂಪೇಗೌಡರನ್ನು ಹಳೆ ಮೈಸೂರು ಭಾಗಕ್ಕೆ ತೆಗೆದುಕೊಂಡು ಹೋಗುವ ಕೆಲಸವೇಕೆ ಆಗಬಾರದು ಎಂದು ಹೇಳಿದ್ದರು .
ಪೂಜ್ಯರ ಈ ನುಡಿಯನ್ನು ಸಮಾನ ಮನಸ್ಕ ಸ್ನೇಹಿತರುಗಳ ಜತೇ ಚರ್ಚಿಸಿದೆವು ಎಲ್ಲರೂ ಸ್ನಂಧಿಸಿದರು ಅದಕ್ಕಾಗಿ ಮೊದಲ ಸಭೆ ಜರುಗಿದ್ದು ಹೋಟೆಲ್ ಕ್ರಿಷ್ಟಲ್ ಪಾರ್ಕ್ ಅಲ್ಲಿ ಆ ಸಭೆಗೆ ಸರಿ ಸುಮಾರು ಮೂವತ್ತು ಜನರನ್ನು ಆಹ್ವಾನಿಸಿದ್ದೆವು ಆದರೆ ಸಭೆಗೆ ಬಂದದ್ದು ಕೇವಲ ಎಂಟು ಜನರು ಆದರು ಅದು ನಮ್ಮ ಯಶಸ್ವಿ ಕಾರ್ಯಕ್ರಮಕ್ಕೆ ಮೊದಲ ಹೆಜ್ಜೆಯಾಗಿತ್ತು.
ಮತ್ತೆರಡು ಸಮಾನ ಮನಸ್ಕರ ಸಭೆ ನಡೆದು ರೂಪುರೇಷೆ ಯೋಜನೆಗಳು ಆಹ್ವಾನಿತರು ವೆಚ್ಚ ಹೀಗೆ ಹಲವು ಚರ್ಚೆ ನಡೆದವು, ಕೆ ಹೆಚ್ ರಾಮಯ್ಯ ಹಾಸ್ಟೆಲ್ ನಲ್ಲಿ ನಡೆದ ಸಭೆ ನಮ್ಮ ಕಾರ್ಯಕ್ರಮಕ್ಕೆ ಮತ್ತೊಂದು ತಿರುವು ನೀಡಿತು..
ಪೂಜ್ಯ ಜಗದ್ಗುರುಗಳಾದ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿಯಾಗಿ ಇಂತಹ ಕಾರ್ಯಕ್ರಮ ಮಾಡುವ ಇಚ್ಚೆ ವ್ಯಕ್ತಪಡಿಸಿದೆವು ಶ್ರೀಗಳು ಕಾರ್ಯಕ್ರಮ ಅಂದ್ರೆ ಹೇಗಿರಬೇಕು, ನಿಮ್ಮನ್ನು ಯಾರು ಕಾರ್ಯಕ್ರಮ ಮಾಡಲೇಬೇಕು ಅಂತ ಕೇಳಿಲ್ಲ ,ಆದರೆ ಮಾಡಿದ ಮೇಲೆ ಗೆಲುವಾಗಿರಬೇಕು ಕನಿಷ್ಟ 25000 ಜನ ಸೇರಿಸುವ ಭರವಸೆಯಿದ್ದರೆ ಆ ಮಟ್ಟಿನ ಸಂಘಟನೆ ಇದ್ದರೆ ಮುಂದುವರೆಯಿರಿ ಎಂದು ಸಲಹೆ ನೀಡಿ ನೀವು ಅಷ್ಟು ಶಕ್ತರು ಎಂದಾಗ ಕರೆ ಮಾಡಿ ಸಾಕು ಎಂದು ಸಲಹೇ ನೀಡಿ ಕಳುಹಿಸಿದರು.
ಕಾರ್ಯಕ್ರಮ ಮಾಡಲೇಬೇಕು ಎಂಬ ಪಣ ತೊಟ್ಟಿದ್ದ ತಂಡ ಪದೇ ಪದೇ ಹೋಗಿ ಭೇಟಿಯಾದೆವು ಮೂರ್ನಾಲ್ಕು ಬಾರಿಯ ಭೇಟಿಯ ನಂತರ ಕಾರ್ಯಕ್ರಮಕ್ಕೆ ಪೂಜ್ಯ ಸ್ವಾಮೀಜಿಯವರು ದಿನಾಂಕ ನಿಗದಿ ಪಡಿಸಿ ನವೆಂಬರ್ 14 ರಂದು ಮಾಡಿ ಆದರೆ ಎಲ್ಲಿಯೂ ಕಾರ್ಯಕ್ರಮ ಸೋಲಬಾರದು ಎಂಬ ಅಪ್ಪಣೇ ಮಾಡಿದರು ನಾವು ಹೊರಡಲು ಅಣಿಯಾದಾಗ ಪೂಜ್ಯರು ಬಾ ಇಲ್ಲಿ ಎಂದು ಕರೆದು ನೀವು ಕಾರ್ಯಕ್ರಮ ಯಾವ ಮಟ್ಟದಲ್ಲಿ ಸಕ್ಸಸ್ ಮಾಡ್ತೀರ ಗೊತ್ತಿಲ್ಲ ಆದರೆ ನಿಮ್ಮ ಉತ್ಸಾಹ ನೋಡಿ ಅದು ಕುಗ್ಗಬಾರದು ಎಂದು ದಿನಾಂಕ ನೀಡಿದ್ದೇನೆ ಚೆನ್ನಾಗಿ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ದಿನಾಂಕ ನಿಗದಿ ನಂತರ ನಮ್ಮ ಸಭೆ ಕಾರ್ಯಕ್ರಮ ರೂಪುರೇಷೇ ಎಲ್ಲವೂ ಕನ್ನೇಗೌಡನ ಕೊಪ್ಪಲಿನ ಒಕ್ಕಲಿಗರ ಹಿತರಕ್ಷಣಾ ಸಮಿತಿಗೆ ವರ್ಗವಾಯಿತು ಕಾರ್ಯಕ್ರಮ ಮುಗಿಯುವವರೆಗೂ ನಮ್ಮ ಕಾರ್ಯಕ್ಷೇತ್ರ ಅದುವೇ ಆಗಿತ್ತು.
ನಂತರದಲ್ಲಿ ನಮ್ಮ ಭೇಟಿ ಮೈಸೂರು ಜಿಲ್ಲೆಯ ನಮ್ಮ ಸಮುದಾಯದ ಹಿರಿಯ ನಾಯಕರಾದ ಶ್ರೀ ಜಿ ಟಿ ದೇವೇಗೌಡರು ಅವ್ರನ್ನ ಭೇಟಿಯಾಗಿ ಅಣ್ಣ ಈ ರೀತಿಯ ಕಾರ್ಯಕ್ರಮ ಮಾಡುವ ಉದ್ದೇಶ ಇದೆ ನಿಮ್ಮ ಪರಿಪೂರ್ಣ ಬೆಂಬಲ ಬೇಕು ಎಂದು ದಿನಾಂಕ ಹೇಳಿದೆವು ದಿನಾಂಕ ಕೇಳಿದ ಗೌಡರು ಕ್ಷಣಕ್ಕೆ ಬಾವುಕರಾದರು ಆಗ ಅವರು ಹೇಳಿದ ಕಾರಣ ನೋಡಿ ನಾನು ಸಹಕಾರ ಮಹಾಮಂಡಳದ ಅಧ್ಯಕ್ಷ ಆಗಿ ಹತ್ತು ವರ್ಷಗಳಿಂದ ನವೆಂಬರ್ 14 ರಂದು ಸಹಕಾರಿ ಸಪ್ತಾಹ ಕಾರ್ಯಕ್ರಮ ಮಾಡ್ತಿದ್ದೆ ರಾಜಕೀಯ ಕುತಂತ್ರದಿಂದ ಈ ವರ್ಷ ಅದು ನನ್ನಿಂದ ಕೈ ತಪ್ಪಿದೆ ಹೀಗಿರುವಾಗ ಈ ದಿನಾಂಕ ನನಗೆ ಆ ನೋವು ನೀಗಿಸಲು ದೇವರು ಕೊಟ್ಟ ಅವಕಾಶ ಎಂದು ಭಾವಿಸುತ್ತೇನೆ ಸಂಪೂರ್ಣವಾಗಿ ನಾನು ನಿಮ್ಮೊಡನೆ ನಿಲ್ಲುತ್ತೇನೆ ಎಂದು ಹೇಳಿದರು.
ಅವರೊಟ್ಟಿಗೆ ಮೈಸೂರು ಜಿಲ್ಲೆಯ ಎಲ್ಲಾ ಸಮುದಾಯದ ನಾರಕರನ್ನು ರಾಜಕಾರಣೀಗಳನ್ನು ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ತಮ್ಮೆಲ್ಲರ ಸಹಕಾರ ಹಾಗು ಆಗಮನ ಕಾರ್ಯಕ್ರಮದ ಶಕ್ತಿ ಎಂದು ಮನವಿ ಮಾಡಿ ಸಫಲರಾದೆವು.
ಆದಿಶಕ್ತಿ ಬಂದಂತಮ್ಮ ಸಮುದಾಯ ಭವನದಲ್ಲಿ ಸಮುದಾಯದ ಪ್ರಮುಖರು ಮಹತ್ವದ ಸಭೆ ಜರುಗಿತು ಸೇರಿದ್ದ ಎಲ್ಲರೂ ಕಾರ್ಯಕ್ರಮ ಯಶಸ್ಸಿಗೆ ಶ್ರಮವಹಿಸೋಣ ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಪೂಜ್ಯ ನಿರ್ಮಲಾನಂದನಾಥಶ್ರೀಗಳು, ಚಂದ್ರಶೇಖರನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಶಿವಾನಂದನಾಥ ಸ್ವಾಮೀಜಿ, ಸಮಾಜದ ಎರಡು ನಕ್ಷತ್ರಗಳಾದ ಹೆಚ್ ಡಿ ದೇವೇಗೌಡರು ಹಾಗು ಎಸ್ ಎಂ ಕೃಷ್ಣರನ್ನು ಒಂದೆ ವೇದಿಕೆಯಲ್ಲಿ ಕಾಣುವ ನಮ್ಮ ಕನಸು ಕುಮಾರಣ್ಣ ಸದಾನಂದಗೌಡರು ಅಶೋಕ್ ಡಿಕೆಶಿ ಮೈಸೂರು ಮಂಡ್ಯ ಚಾಮರಾಜನಗರ ಹಾಸನದ ಎಲ್ಲಾ ಸಮುದಾಯದ ಜನಪ್ರತಿನಿಧಿಗಳನ್ನು ಆಹ್ವಾನಿಸುವ ನಿರ್ಣಯ ಮಾಡಲಾಯಿತು.
ಆಗಷ್ಟೇ ಬೆಳಕಿಗೆ ಬಂದಿದ್ದ ಕೆಂಪಾಪುರದಲ್ಲಿನ ಕೆಂಪೇಗೌಡರ ಸಮಾಧಿಯಿಂದ ಕೆಂಪೇಗೌಡರ ಜ್ಯೋತಿ ಹಾಗು ಪ್ರಚಾರ ರಥಕ್ಕೆ ಚಾಲನೆ ನೀಡಲು ನಿರ್ಧರಿಸಿ ಅಕ್ಟೋಬರ್ 21 ರಂದು ಕೆಂಪಾಪುರದಲ್ಲಿ ಪ್ರಚಾರ ಜ್ಯೋತಿಗೆ ಪೂಜ್ಯ ನಂಜಾವಧೂತ ಶ್ರೀಗಳು ಚಾಲನೆ ನೀಡಿದರು ಪ್ರಚಾರ ಸಮಿತಿಯ ತಂಡದ ನೇತ್ರತ್ವ ವಹಿಸಿದ್ದ ನಾನು ಹಾಗು ನಮ್ಮ ತಂಡದ ಸದಸ್ಯರು ರೂಟ್ ಮ್ಯಾಪ್ ಕೆಂಪೇಗೌಡರ ಜ್ಯೋತಿಯೊಡನೆ ಹೊರಟೆವು.
ಕೆಂಪಾಪುರದಿಂದ ಹೊರಟ ಜ್ಯೋತಿ ಪಾಂಡವಪುರ , ಶ್ರೀರಂಗಪಟ್ಟಣ ,ನರಸೀಪುರ ,ಮಳವಳ್ಳಿ, ಕೊಳ್ಳೆಗಾಲ,ನಂಜನಗೂಡು,ಕೋಟೆ ಹುಣಸೂರು,ಕೆ ಆರ್ ನಗರ ಪಿರಿಯಾಪಟ್ಟಣ ಮೈಸೂರು ತಾಲ್ಲೂಕು ಹಾಗು ಮೈಸೂರು ನಗರದಲ್ಲಿ ಸಂಚರಿಸಿತು ರಥ ಸಂಚರಿಸುವಾಗ ಗ್ರಾಮಗಳಲ್ಲಿ ಕೆಂಪೇಗೌಡರ ಜ್ಯೋತಿಯನ್ನು ದೇವರ ಉತಸವದಂತೆ ತಳಿರುತೋರಣ ಪಾನಕ ಮಜ್ಜಿಗೆ ಹೀಗೆ ವಿಭಿನ್ನವಾಗಿ ಸ್ವಾಗತಿಸಿದರು ಪ್ರತಿ ಮನೆಯಲ್ಲಿ ಸಹ ಪೂಜೆ ಆರತಿ ಬೆಳಗುವ ಮೂಲಕ ಕಾರ್ಯಕ್ರಮ ಯಾವ ಮಟ್ಟದಲ್ಲಿ ಜರುಗಲಿದೆ ಎಂಬುದರ ದಿಕ್ಸೂಚಿ ಆಗಿತ್ತು.
ನವೆಂಬರ್ ಹದಿನಾಲ್ಕರ ಕಾರ್ಯಕ್ರಮ ದಿನ ಹತ್ತಿರವಾದಂತೆ ಮಹಾರಾಜ ಮೈದಾನದಲ್ಲಿ ಬೇಡ ಜನ ಬರುವುದು ಕಷ್ಟ ಜೆಕೆ ಗ್ರೌಂಡಿನಲ್ಲಿ ಮಾಡೋಣ ಎಂಬ ನಿರ್ಣಯವಾಗಿತ್ತು ಇದು ನಮಗೆ ಸ್ವಲ್ಪ ಬೇಸರ ತಂತು ಕಾರಣ ಮೊದಲ ಮೀಟಿಂಗಿನಲ್ಲೆ ನಾವು ಮಹಾರಾಜ ಮೈಧಾನ ಧಾರ್ಮಿಕ ರಾಜಕೀಯ ಹಾಗು ಸಾಹಿತ್ಯಿಕ ಸಾಂಸ್ಕೃತಿಕ ರಥ ಸಹಸ್ರಾರು ಜನ ಮೆರವಣಿಗೆ ಅದು ಅಂಗೆ ಇಂಗೆ ಅಂತ ಕನಸು ಕಂಡವರಾಗಿದ್ದೆವು ಆದರೆ ಹಿರಿಯರ ಮಾತಿಗೆ ಮನ್ನಣೆ ನೀಡಿ ಜೆಕೆ ಮೈಧಾನಕ್ಕೆ ಸಮ್ಮತಿಸಿದ್ದೆವು ಕಾರ್ಯಕ್ರಮ ಐದಾರು ದಿನ ಇರುವಾಗ ಸುರಿದ ಬಾರಿ ಮಳೆ ಜೆಕೆ ಮೈಧಾನವನ್ನು ಕೆರೆಯನ್ನಾಗಿಸಿತು (ಮೊದಲು ಸಹ ಅದು ಕೆರೆಯೇ ಆಗಿತ್ತು) ನೀರು ಹಿಂಗುವ ಯಾವುದೇ ಲಕ್ಷಣ ಕಾಣುತ್ತಿರಲಿಲ್ಲ ಕಡೆಗೆ ಕಾರ್ಯಕ್ರಮ ಮಹಾರಾಜ ಮೈಧಾನಕ್ಕೆ ಮತ್ತೆ ಶಿಫ್ಟ್ ಆಯಿತು ಬಹುಶ ಕೆಂಪೇಗೌಡರಿಗೆ ನಮ್ಮ ಮನದ ಭಾವನೆ ಅರ್ಥವಾಗಿತ್ತು ಅನ್ಸುತ್ತೆ,,ಕಾರ್ಯಕ್ರಮದ ಹಿಂದಿನ ದಿನ ಒಂದು ರೀತಿಯ ಭಯ ನಿರೀಕ್ಷೆ ಹುಸಿಯಾಗುವುದೇ ಎಂಬ ಕಳವಳ ಕಾಡುತ್ತಿತ್ತು ನಿದಿರೆ ಬಾರದಾಗಿತ್ತು.
ಕಾರ್ಯಕ್ರಮ ದಿನ ಬಂದೇ ಬಿಟ್ಟಿತು.
14/11/2015 ಆ ದಿನ ಬಂದಿತ್ತು ಸಮಯ ಹತ್ತು ಗಂಟೆ ವೇಳೆಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಜನ ಕೇವಲ ಒಂದು ಗಂಟೆ ಅಷ್ಟರಲ್ಲಿ ಕನಿಷ್ಟ 25000 ಜನ ಅಷ್ಟು ಮೆರವಣಿಗೆಗೆ ಬಂದರು ಕೆಂಪೇಗೌಡರ ರಥ ಮೆರೆವಣಿಗೆಯ ಅಂಬಾರಿ ಅಂತಿತ್ತು ತಿಂಗಳ ಹಿಂದೆ ದಸರಾ ಕಂಡಿದ್ದ ಮೈಸೂರು ಜನರಿಗೆ ಮತ್ತೊಂದು ದಸರಾ ಅದಾಗಿತ್ತು.
ಮೆರವಣಿಗೆ ಇತಿಹಾಸವನ್ನೇ ಸೃಷ್ಟಿಸಿತ್ತು ಕಾರ್ನಾಡ್ ಮಾತಿನಿಂದ ರೊಚ್ಚಿಗೆದ್ದಿದ್ದ ಜನತೆ ದಾರಿಯುದ್ದಕ್ಕೂ ಸಮುದಾಯದ ಪರ ಘೋಷಣೆ ಕೂಗಿ ಉತ್ಸಾಹ ವ್ಯಕ್ತ ಪಡಿಸಿದ್ದರು ನಮ್ಮ ಸಮಿತಿಯ ದೊರೆಸ್ವಾಮಿ ಅವರು ತಮ್ಮ ಸ್ವಂತ ಖರ್ಚಿನಿಂದ ನಿರ್ಮಾಣ ಮಾಡಿದ್ದ ಒಕ್ಕಲಿಗ ಕುಲತಿಲಕ ಬೆಂಗಳೂರು ಜನಕ ಹಾಗು ಇಂಗ್ಯಾಕೆ ಕುಂತೀಲಾ ನೀನ್ಯಾರ್ಗೆ ಕಮ್ಮೀಲ ಹಾಡುಗಳು ರಸ್ತೆಯುದ್ದಕ್ಕೂ ದೂಳೆಬ್ಬಿಸುವವರ ಪಾಲಿಗೆ ಆಯ್ಕೆಯ ಹಾಡುಗಳಾಗಿದ್ದವು.
ಕೆಲ ನಾಯಕರ ಅನುಪಸ್ಥಿತಿ ನಡುವೆ ಕಾರ್ಯಕ್ರಮ ಜರುಗಿತು ಜನಸಾಗರದಲ್ಲಿ ಮೈಸೂರು ಕೆಂಪೇಗೌಡರ ಸ್ಮರಣೋತ್ಸವ ಅಂತಿಮಹಂತಕ್ಕೆ ತಲುಪಿತ್ತು ಬೆಳಿಗ್ಗೆ ಹತ್ತರಿಂದ ಸಂಜೆ ಆರು ಗಂಟೆಯವರೆಗೂ ಒಬ್ಬ ಜನ ಖಾಲಿಯಾಗದಂತೆ ಸ್ವ ಇಚ್ಛೆಯಿಂದ ಜನ ಭಾಗವಹಿಸಿದ್ದರು ಪೂಜ್ಯರಾಧಿಯಾಗಿ ಎಲ್ಲರೂ ಸಮಾಜ ಹಾಗು ಕೆಂಪೇಗೌಡರ ಬಗ್ಗೆ ಸುದೀರ್ಘ ವಿಷಯಗಳನ್ನು ಪರಿಚಯಿಸಿದರು.
ಜಿಟಿ ದೇವೇಗೌಡರು ಕಾರ್ಯಕ್ರಮದ ಪ್ರಾಸ್ಥಾವಿಕ ನುಡಿಯ ಜತೆಗೆ ಸ್ವಾಗತಿಸಿದರೆ ಸಾರಾ ಮಹೆಶ್ ರವರು ವಂಧನಾರ್ಪಣೆ ಸಲ್ಲಿಸಿದರು ಮೈಸೂರು ಚಾಮರಾಜನಗರ ಹಾಸನ ಮಂಡ್ಯ ಜಿಲ್ಲೆಯ ಎಲ್ಲಾ ಸಮುದಾಯದ ಜನ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮ ಯಶಗೊಳಿಸಿದರು ಎಲ್ಲದಕ್ಕೂ ಮೇಟಿಯೆಂಬಂತೆ ಜಿ ಟಿ ದೇವೇಗೌಡರು ಕಾರ್ಯಕ್ರಮದ ಎಲ್ಲಾ ಆಯಾಮಗಳನ್ನು ಮುತುವರ್ಜಿಯಿಂದ ತೆಗೆದುಕೊಂಡದ್ದು ಕಾರ್ಯಕ್ರಮದ ಗೆಲುವಿಗೆ ಪ್ರಮುಖ ಅಂಶವಾಗಿತ್ತು. ಸಭಾ ನಿರ್ಣಯ ಸಿದ್ದಪಡಿಸಿ ಮಂಡಿಸುವ ಜವಾಬ್ದಾರಿಯನ್ನು ಪೂಜ್ಯ ನಿರ್ಮಲಾನಂದನಾಥಶ್ರೀಗಳು ನನ್ನ ಹೆಗಲಿಗೆ ವಹಿಸಿದ್ದರು ನನ್ನ ಸೌಭಾಗ್ಯವೆಂದೆ ಭಾವಿಸಿ ಅಚ್ಚು ಕಟ್ಟಾಗಿ ನಿರ್ವಹಿಸಿದೆನು.
ಕಾರ್ಯಕ್ರಮದಲ್ಲಿ ಸತತ ಆರು ತಿಂಗಳು ಸಮಿತಿಯ ಸದಸ್ಯರಾಗಿ ದುಡಿದ ಎಲ್ಲಾ ಕೆಂಪೇಗೌಡರ ಸ್ಮರಣೋತ್ಸವ ಸಮಿತಿಯ ಸದಸ್ಯರುಗಳಿಗೆ ಧನ್ಯವಾದಗಳು.
ಸಾಗರದಂತೆ ಹರಿದು ಬಂದು ಜನಸಾಗರವನ್ನೆ ಸೃಷ್ಠಿಸಿದ ಸಮುದಾಯದ ಬಂಧುಗಳಿಗೆ ಕೋಟಿ ನಮನಗಳು 🙏
ಜೀವಮಾನಶ್ರೇಷ್ಟ ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ಒದಗಿ ಬಂದದ್ದು ನಮ್ಮ ಸೌಭಾಗ್ಯವೇ ಸರಿ.
- ಬೀಡನಹಳ್ಳಿ ಸತೀಶ್ ಗೌಡ*✍
ಕೆಂಪೇಗೌಡ ಸ್ಮರಣೋತ್ಸವ ಸಮಿತಿ ಸದಸ್ಯ
