ಕೊಳ್ಳೇಗಾಲ.ನಮ್ಮ ಕನ್ನಡ ನಾಡಿನ ಪರಂಪರೆಯನ್ನು ವೀರರು, ಶೂರರು, ಕವಿಗಳು, ದಾರ್ಶನಿಕರನು ಸ್ಮರಿಸುತ್ತೇನೆ. ಅಧ್ಯಕ್ಷ ಬಿಎಂ ಪುಟ್ಟ ಮಾದಪ್ಪ.
ಪಟ್ಟಣದ ಲಯನ್ಸ್ ಸಮುದಾಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಸಾಹಿತ್ಯದ ನಡಿಗೆ ಶಾಲಾ ಕಾಲೇಜುಗಳ ಹಾಗೂ ಸಮುದಾಯ ತೆರಿಗೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷರು ಬಿ.ಎಂ. ಪುಟ್ಟಮಾದಪ್ಪ ಅವರು ಉದ್ಘಾಟಿಸಿ ಮಾತನಾಡಿ, ನಮ್ಮ ಕನ್ನಡ ನಾಡಿನ ಪರಂಪರೆಯನ್ನು ವೀರರು, ಶೂರರು, ಕವಿಗಳು, ದಾರ್ಶನಿಕರು ಹುಟ್ಟಿ ಬೆಳೆದ ಕರುನಾಡನು ಅದಕ್ಕೆ ಮನ್ನಣೆ ನೀಡಿದ ಎಲ್ಲಾ ಮಹನೀಯರನ್ನು ನನ್ನ ಮನದಾಳದಲ್ಲಿ ಸ್ಮರಿಸುತ್ತೇನೆ. ಕಾವೇರಿಯಿಂದ ಗೋದಾವರಿ ವರೆಗಿರುವ ಕಪ್ಪು ಮಣ್ಣಿನ ಭೂಮಿ ಕರ್ನಾಟಕ ಇಲ್ಲಿನ ಜನ್ಮ ತಳೆದ ನಾವೇ ಭಾಗ್ಯವಂತರು ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಾಹಿತಿ ಹಿಂದ್ವಾಡಿ ಶಿವಣ್ಣ ಅವರು ಮಾತನಾಡಿ, ಲಯನ್ಸ್ ಸಂಸ್ಥೆ ಸೇವೆಯನ್ನು ತನ್ನ ಉಸಿರಾಗಿಸಿಕೊಂಡಿರುವುದರ ಜೊತೆಗೆ ಕನ್ನಡದ ಭಾಷೆ, ಸಂಸ್ಕೃತಿಯ ಬಗ್ಗೆ ಇಷ್ಟು ಒಲವುನ್ನು ಬೆಳೆಸಿಕೊಂಡಿರುವುದು ಶ್ಲಾಘನೀಯ ವಿಚಾರ. ಇದೇ ರೀತಿಯಲ್ಲಿ ಕನ್ನಡ ನಾಡಿನ ಪ್ರತಿಯೊಂದು ಸಂಸ್ಥೆಯು ಕೂಡ ಆಸಕ್ತಿ ವಹಿಸಿ ಕನ್ನಡದ ಸಂಸ್ಕೃತಿಯ ಬಗ್ಗೆ ಸಕಾರಾತ್ಮಕ ಧೋರಣೆ ತೋರಿದರೆ ಕನ್ನಡ ಉಳಿಸುವಂತೆ ಹೋರಾಟ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಮತ್ತು ಲಯನ್ಸ್ ಸಂಸ್ಥೆ ಕಾರ್ಯದರ್ಶಿ ನಾಗರಾಜು ಕೊಂಗರಹಳ್ಳಿ ಮಾತನಾಡಿ, ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯವಲ್ಲ ಅದು ಕನ್ನಡಿಗರ ಬದುಕಿನ ಉಸಿರು ಸಂಸ್ಕೃತಿಯ ಜೀವನಾಡಿ ಜ್ಞಾನದ ಬೆಳಕು ಮತ್ತು ಸಾಮಾಜಿಕ ಪರಿವರ್ತನೆ ಆಗಿದೆ ಕನ್ನಡ ಇತಿಹಾಸವನ್ನು ಅವಲೋಕಸಿದಾಗ ಅದಕ್ಕೆ ಹೊಸ ಚೈತನ್ಯ ಹೊಸ ಆಯಾಮ ಮತ್ತು ಜನಸಾಮಾನ್ಯರ ಬದುಕಿನೊಂದಿಗೆ ಬೆರೆದ ವಿಶಿಷ್ಟ ಘನತೆಯನ್ನು ತಂದುಕೊಟ್ಟಿದೆ ಮಹನೀಯರಲ್ಲಿ ಬಸವಣ್ಣ ಬಸವಾದಿ ಶರಣರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಕನ್ನಡದ ಮಹತ್ವ ಸಾರಿದರು.
ಶಾಲಾ-ಕಾಲೇಜುಗಳಲ್ಲಿ ಶರಣರ ಜೀವನ ವಿಚಾರ ಮತ್ತು ಸಾಹಿತ್ಯದ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಕನ್ನಡದಲ್ಲಿ ಹೊಸ ಜ್ಞಾನ ಸಂಪತ್ತನ್ನು ಸೃಷ್ಟಿಸುವ ಮೂಲಕ ಭಾಷೆಯನ್ನು ಆಧುನಿಕರಣ ಗೊಳಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರು ಮಾದೇಶ್, ಟ್ರಸ್ಟಿ ಚನ್ನಮಾದೇಗೌಡ ಹಾಗೂ ಲಯನ್ಸ್ ಸಂಸ್ಥೆಯ ಸದಸ್ಯರು, ಕಸಾಪ ಪದಾಧಿಕಾರಿಗಳು ಇದ್ದರು.
