ಪ್ರತಿ ಗ್ರಾಪಂಗೆ ೧ ಕೋಟಿ ರೂ.ಕ್ರಿಯಾಯೋಜನೆ ರೂಪಿಸಿ:ಶಾಸಕ ಜಿಟಿಡಿ ಸೂಚನೆ


ಮೈಸೂರು: ಶಾಲೆಗಳು,ಅಂಗನವಾಡಿ,ಸ್ಮಶಾನಗಳಿಗೆ ಕುಡಿಯುವ ನೀರು,ಮೂಲಸೌಕರ್ಯ ಒದಗಿಸುವುದು ಸೇರಿದಂತೆ ಗ್ರಾಪಂನಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯವಾಗದ ಕಾಮಗಾರಿಗಳಿಗೆ ಅಂದಾಜು ಒಂದು ಕೋಟಿ ರೂಪಾಯಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಬೇಕು. ಸರ್ಕಾರದಿಂದ ಮಂಜೂರಾದ ತಕ್ಷಣವೇ ಕಾಮಗಾರಿ ಆರಂಭಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ಗ್ರಾಪಂ ಅಧಿಕಾರಿಗಳ ಪ್ರಗತಿಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ರಾಜ್ಯಸರ್ಕಾರದಿಂದ ಪ್ರತಿ ಗ್ರಾಪಂಗೆ ೫೦ ಲಕ್ಷ ರೂ. ಅನುದಾನ ನೀಡುತ್ತಿದೆ.ಆದರೆ, ಪ್ರತಿ ಗ್ರಾಪಂಗೆ ಒಂದೊಂದು ಕೋಟಿ ರೂ.ಹಣವನ್ನು ತರುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ.ಪ್ರತಿ ಪಂಚಾಯಿತಿಗೂ ಒಂದು ಕೋಟಿ ರೂ.ಅನುದಾನ ತಂದೇ ತರುತ್ತನೆ. ಗ್ರಾಪಂನಲ್ಲಿ ಕೈಗೆತ್ತಿಕೊಳ್ಳಲಾಗದ ಕಾಮಗಾರಿಗಳಿಗೆ ಅಂದಾಜು ಪ್ರಸ್ತಾವನೆುಂನ್ನು ತಾಂರಿಸಿ ಸಲ್ಲಿಸಬೇಕು ಎಂದು ಹೇಳಿದರು.ಗ್ರಾಮ ಪಂಚಾಯಿತಿ ವ್ಯಾಪ್ತಿುಂಲ್ಲಿ ಬರುವ ಗ್ರಾಮಗಳಲ್ಲಿ ಇರುವ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು,ಸ್ಮಶಾನಗಳಿಗೆ ಮೂಲಸೌಕಂರ್ು ಒದಗಿಸಲು ಅಗತ್ಯ ಕ್ರಿಾಂೋಂಜನೆ ರೂಪಿಸಿ ಸಲ್ಲಿಸಬೇಕು. ಸರ್ಕಾರದ ಅನುದಾನ ಬಿಡುಗಡೆ ವಾಡುವವರೆಗೂ ಬೇಕಾದ ಎಲ್ಲಾ ಸೌಲಭ್ಯಗಳ ಕಲ್ಪಿಸಲು ಅಂದಾಜು ವೆಚ್ಚ ಮತ್ತು ಕ್ರಿಾಂೋಂಜನೆ ತಾಂರು ವಾಡಬೇಕು ಎಂದು ಹೇಳಿದರು. ಗ್ರಾಪಂನಲ್ಲಿ ಸಂಗ್ರಹವಾಗುವ ತೆರಿಗೆ ಹಣದಿಂದ ಎಲ್ಲವನ್ನು ಒದಗಿಸಲಾಗದು. ಕುಡಿಯುವ ನೀರಿಗೆ ಬೇಕಾದ ಪೈಪ್‌ಲೈನ್, ಹೆಚ್ಚುವರಿ ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬೇಕಿರುವುದರಿಂದ ಪಿಡಿಒಗಳು ಪ್ರತಿಯೊಂದು ಕಾಮಗಾರಿಗೂ ಪಟ್ಟಿ ಮಾಡಿ ಕ್ರಿಯಾಯೋಜನೆ ಮಾಡಿದರೆ ಅದಕ್ಕೆ ತಕ್ಕಂತೆ ಅನುದಾನ ಕೊಡಲಾಗುವುದು ಎಂದು ನುಡಿದರು. ಸ್ಮಶಾನಗಳನ್ನು ಗುರುತುಪಡಿಸುವ ಜತೆಗೆ ಕುಡಿಯುವ ನೀರು ಮೊದಲಾದ ಸೌಲಭ್ಯ ಕೊಡಬೇಕು. ಪಂಚಾಯಿತಿಯಲ್ಲಿ ಹಣವಿಲ್ಲವೆಂದು ಕೈ ಚೆಲ್ಲಿ ಕೂರಬಾರದು. ಮೊದಲು ಬೇಕಾದ ಸೌಲಭ್ಯ ಒದಗಿಸಬೇಕು. ಗ್ರಾಮಸ್ಥರಿಂದ ಬರುವ ದೂರುಗಳನ್ನು ತಪ್ಪಿಸಬೇಕು ಎಂದುತಾಕೀತು ಮಾಡಿದರು.
೧೦ರೊಳಗೆ ಸರ್ವೆ ಕಾರ್ಯ ಮುಗಿಸಿ: ಸರ್ಕಾರಿ ಶಾಲೆಗಳು,ಕೆರೆಕಟ್ಟೆಗಳು, ಅಂಗನವಾಡಿ ಕೇಂದ್ರಗಳು,ಸ್ಮಶಾನಗಳ ಜಾಗವನ್ನು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು,ಸರ್ವೆಯರ್‌ಗಳು ಜಂಟಿಯಾಗಿ ಸರ್ವೆ ಮಾಡಬೇಕು. ಜಾಗವನ್ನು ಸರ್ವೆ ಮಾಡಿ ಹದ್ದುಬಸ್ತು ಮಾಡಿದ ಮೇಲೆ ಖಾತೆ ಮಾಡಬೇಕು. ಅಕ್ಟೋಬರ್ ೧೦ರೊಳಗೆ ಬಾಕಿ ಇರುವ ಎಲ್ಲಾ ಶಾಲೆ,ಸ್ಮಶಾನಗಳ ಸರ್ವೆ ಕಾರ್ಯ ಮುಗಿಸಬೇಕು ಎಂದು ಸೂಚಿಸಿದರು. ಸರ್ಕಾರಿ ಸರ್ವೆಯರ್‌ಗಳ ಜತೆಗೆ ಖಾಸಗಿ ಸರ್ವೆಯರ್‌ಗಳನ್ನು ಬಳಸಿಕೊಳ್ಳಬೇಕು. ಅಭಿಯಾನದ ಮಾದರಿಯಲ್ಲೇ ಈ ಕೆಲಸವನ್ನು ಕೈಗೆತ್ತಿಕೊಂಡರೆ ಸಕಾಲದಲ್ಲಿ ಮುಗಿಸಬಹುದು ಎಂದು ಹೇಳಿದರು. ಸರ್ಕಾರಿ ಶಾಲೆ,ಕೆರೆಕಟ್ಟೆಗಳ ಜಾಗವನ್ನು ಉಳಿಸಬೇಕು. ಮುಂದಿನ ದಿನಗಳಲ್ಲಿ ಸ್ಮಶಾನಕ್ಕೆ ಜಾಗದ ಕೊರತೆ ಉಂಟಾಗುವ ಕಾರಣ ಸರ್ಕಾರಿ ಭೂಮಿಯನ್ನು ಗುರುತಿಸಿ ಮೀಸಲಿಡಬೇಕು. ಇಲ್ಲದಿದ್ದರೆ ಖಾಸಗಿ ಭೂಮಿಯನ್ನು ಖರೀದಿಸಬೇಕಾಗುತ್ತದೆ ಎಂದರು.
ನಾಗನಹಳ್ಳಿ,ಚಾಮುಂಡಿಬೆಟ್ಟ, ಗುಂಗ್ರಾಲ್‌ಛತ್ರ,ದೂರ,ಇಲವಾಲ,ಸಿದ್ದಲಿಂಗಪುರ, ಉದ್ಬೂರು, ದೊಡ್ಡಮಾರಗೌಡನಹಳ್ಳಿ ಸೇರಿ ಇನ್ನಿತರ ಪಂಚಾಯಿತಿಗಳ ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿರುವ ಆಗಿರುವ ಕೆಲಸ,ಸಮಸ್ಯೆಗಳು ಹಾಗೂ ಆಗಬೇಕಿರುವ ಕೆಲಸಗಳ ಬಗ್ಗೆ ವರದಿ ಸಲ್ಲಿಸಿದರು. ತಹಸಿಲ್ದಾರ್ ಕೆ.ಎಂ.ಮಹೇಶ್‌ಕುಮಾರ್,ತಾಪಂ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಆಸಿಫ್ ಇಕ್ಬಾಲ್ ಮೊಹಮ್ಮದ್ ಮತ್ತಿತರರು ಹಾಜರಿದ್ದರು.
