ಚಾಮರಾಜನಗರ ಜಿಲ್ಲೆಯ ಮಹದೇವು.ಹೆಚ್ ಅವರಗೆ “ವರ್ಣಶ್ರೀ ಪ್ರಶಸ್ತಿ” ಗೌರವ

Bangarappa c journalist
Bangarappa c journalist - Journalist
2 Min Read

ಚಾಮರಾಜನಗರ ಜಿಲ್ಲೆಯ ಮಹದೇವು.ಹೆಚ್ ಅವರಗೆ “ವರ್ಣಶ್ರೀ ಪ್ರಶಸ್ತಿ” ಗೌರವ

 

 

 


ಚಾಮರಾಜನಗರ, ನ.೦೪- ಚಾಮರಾಜನಗರ ಜಿಲ್ಲೆಯ ಮಹದೇವು.ಹೆಚ್ ಅವರಗೆ ವರ್ಣಶ್ರೀ ಪ್ರಶಸ್ತಿ ನೀಡಿಗೌರವಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆ,ಬೆಂಗಳೂರು ಮತ್ತು ಕರ್ನಾಟಕ ಲಲಿತಾಕಲಾ ಅಕಾಡಮಿ ವತಿಯಿಂದ ಪ್ರತಿವರ್ಷ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನ ವರ್ಣಶ್ರೀ ಪ್ರಶಸ್ತಿಯನ್ನು ಚಾಮರಾಜನಗರದ ಚಿತ್ರಕಲಾವಿದರಾದ ಮಹದೇವು.ಹೆಚ್ ಅವರಿಗೆ ದಿನಾಂಕ ೩೦-೧೦-೨೦೨೬ ರಂದು ಗದಗಿನ ಸಂಸ್ಕೃತಿ ಕನ್ವೆನ್ನನ್ಸ್ ಬೈ-ಟಿ.ಆರ್.ಐ ವಂಚರ್ಸ್ ಸಭಾಂಗಣದಲ್ಲಿ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾದ ಪ,ಸ.ಕುಮಾರ್ ನೀಡಿ ಗೌರವಿಸಿದರು. ಮಹದೇವು.ಹೆಚ್ ಅವರು ಚಾಮರಾಜನಗರ ಜಿಲ್ಲಾ ಪಂಚಾಯಿತ್ ವತಿಯಿಂದ ನಾಡಹಬ್ಬ ದಸರಾ ಭಾಗವಹಿಸುವ ಟ್ಯಾಬ್ಲೊö್ಯÃ ಗಳನ್ನು ತಯಾರಿಸಿ ಹಲವಾರು ಬಾರಿ ಬಹುಮಾನವನ್ನು ತಂದುಕೊಟ್ಟಿದ್ದಾರೆ. ಹಾಗೂ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
____________________________________________________________________________

೮೦ವರ್ಷ ತುಂಬಿದ ಪಿಂಚಣಿದಾರರಿಗೆ ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ ಪಿಂಚಣಿದಾರರ ಸಂಘದ ವತಿಯಿಂದ ಸನ್ಮಾನ
ಚಾಮರಾಜನಗರ, ನ.೦೪ ಸರ್ಕಾರಿ ಕೆಲಸದ ವೃತ್ತಿಯಲ್ಲಿ ನಿವೃತ್ತರಾಗಿರುವ ಹಿರಿಯರನ್ನು ಗೌರಸಿ ಅವರಿಗೆ ಇನ್ನು ಉತ್ತೇಜನ ನೀಡುವುದರಿಂದ ಅವರ ಆರೋಗ್ಯ ದಿಂದ ಇರಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ ಪಿಂಚಣಿದಾರರ ಸಂಘದ ಅಧ್ಯಕ್ಷರಾದ ನ್ಯಾನಮುತ್ತು ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ ಪಿಂಚಣಿದಾರರ ಸಂಘವು ಬುಧವಾರ ನಡೆದ ಕಾರ್ಯಕ್ರಮದಲ್ಲಿ ೮೦ವರ್ಷ ಪೂರೈಸಿದ ಪಿಂಚಣಿದಾರರನ್ನು ಗೌರವಿಸಿ ಅವರು ಮಾತನಾಡಿದರು.
ಸರ್ಕಾರ ನಿಯಮದ ಪ್ರಕಾರ ನಿವೃತ್ತಿ ಸಹಜ. ಸರ್ಕಾರಿ ನಿವೃತ್ತ ಪಿಂಚಣಿದಾರರ ಅನುಕೂಲಕ್ಕಾಗಿ ಈ ಸಂಘವನ್ನು ನಡೆಸಲಾಗುತ್ತಿದೆ. ಪಿಂಚಣಿದಾರರಿಗೆ ಕಚೇರಿಯಲ್ಲಿ ಸಿಗುವ ಸೌಲಭ್ಯಗಳ ವಿವರಗಳನ್ನು ಇಲ್ಲಿ ತಿಳಿಸಲಾಗುವುದು.ಎಂದು ಹೇಳಿದರು.
ಚಾಮರಾಜನಗರ ತಾಲ್ಲೂಕಿನಲ್ಲಿ ೧೬೬ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಅದರಲ್ಲಿ ಸಂಘದ ಸದಸ್ಯರಾಗಿ ೧೦೦ ಇದ್ದಾರೆ. ಇನ್ನುಉಳಿದವರು ಸಂಘದ ಸದಸ್ಯರಾದರೆ ಸಂಘವು ಬಲಪಡಿಸಿದಂತಾಗುತ್ತದೆ.ಎAದು ಹೇಳಿದರು.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಲಿ ಲೆಕ್ಕಾಧಿಕಾರಿ ಎನ್.ಮಹೇಶ್ ಮಾತನಾಡಿ ನಿವೃತ್ತರು ಜೀವನದಲ್ಲಿ ಶಂತೋಷದಿAದ ಇರಬೇಕು. ಕುಟುಂಬದ ವ್ಯಕ್ತಿಗಳುಸ ಅವರಿಗೆ ಗೌರವ ಕೊಡುವುದರ ಜೊತೆಗೆ ಪ್ರೀತಿಯಿಂದ ನೋಡೊಕೊಳ್ಳಬೇಕು, ಪಿಂಚಣಿದಾರರ ಯಾವುದೇ ಕಚೇರಿಯ ಕೆಲಸಗಳನ್ನು ತಕ್ಷಣದಲ್ಲಿ ಮಾಡಿಕೊಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಯೋ ನಿವೃತ್ತಿ ಜೀವನನಡೆಸಿ ೮೦ವರ್ಷ ತುಂಬಿದ ವಿ.ನಾರಾಯಣಸ್ವಾಮಿ, ಗೋವಿಂದಶೆಟ್ಟಿ, ಬಿ.ಶಿವಣ್ಣ, ಸ್ಟೋರ್ ಸಿದ್ದಯ್ಯ, .ಟಿ.ಎಂ.ಪಾರ್ವತಮ್ಮ, ಪುಟ್ಟರಾಜು, ಜಿ.ಶಿವಲಿಂಗಪ್ಪ, ಎನ್.ಎಂ.ರಾಜನ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ಸದಸ್ಯರಾದ ನಂಜುAಡಸ್ವಾಮಿ, ಕಾಳಯ್ಯ, ರಾಜನ್, ಖಜಾಂಚಿ ಗುರುಸ್ವಾಮಿ, ಪಿ.ಸಿದ್ದಯ್ಯ ಹಾಗೂ ಇನ್ನು ಮುಂತಾದವರು ಇದ್ದರು.

Share This Article