ಜನಬಲದಿಂದ ಮಾತ್ರ ನೈಜ ಗೆಲುವು ಸಾದ್ಯ :ಬಿಜೆಪಿ ಮುಖಂಡರಾದ ನಿಶಾಂತ್‌.

Bangarappa c journalist
Bangarappa c journalist - Journalist
2 Min Read

•

ಜನಬಲದಿಂದ ಮಾತ್ರ ನೈಜ ಗೆಲುವು ಸಾದ್ಯ :ಬಿಜೆಪಿ ಮುಖಂಡರಾದ ನಿಶಾಂತ್‌.

ಹನೂರು:ಕ್ಷೇತ್ರ ವ್ಯಾಪ್ತಿಯಲ್ಲಿ ನ ಪಿ.ಜಿ.ಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಯಾವುದೇ ಹಣ ಮತ್ತು ಅಧಿಕಾರದ ಆಸೆಯನ್ನು ತೋರೆದು ಬಿಜೆಪಿಯ ಸಾಮನ್ಯ ಕಾರ್ಯಕರ್ತನಾದ ನನ್ನನ್ನು ನಂಬಿ ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ತೋರಿಸಿದ ಒಗ್ಗಟ್ಟನ್ನು ಮುಂದಿನ ಚುನಾವಣೆಗಳಲ್ಲೂ ತೋರಿಸಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಂಘಟಿತರಾಗಬೇಕು ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ಕರೆ ನೀಡಿದರು.

ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿರುವ ಶ್ರೀ ಗುರು ಮಲ್ಲೇಶ್ವರ ಸಮುದಾಯ ಭವನದಲ್ಲಿ ನೂತನವಾಗಿ ಆಯ್ಕೆಯಾಗಿರುವ ಪಿಎಸಿಸಿಎಸ್ ನಿರ್ದೇಶಕರಿಗೆ ನೀಶಾಂತ್ ಅಭಿಮಾನಿಗಳು ಸನ್ಮಾನ ಕಾರ್ಯವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು ಇಡೀ
ರಾಜ್ಯದಲ್ಲೆ ಪ್ರತಿನಿತ್ಯವೂ ಕಾಂಗ್ರೆಸ್ ಹಾಗೂ ಜಾ.ದಳ ಪಕ್ಷಗಳೆರಡು ಸಹ ಹಾವು-ಮುಂಗುಸಿಯಂತೆ ಜಗಳವಾಡುತ್ತಿವೆ. ಆದರೆ ಪಿ.ಜಿ.ಪಾಳ್ಯ ಗ್ರಾಮದಲ್ಲಿ ಮಾತ್ರ ಅಧಿಕಾರಕ್ಕಾಗಿ ಜಾತ್ಯಾತೀತ ಜನತಾದಳ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಚುನಾವಣೆ ಎದುರಿಸಿರುವ ಉದಾಹರಣೆಯನ್ನು ನಾವು ಕಾಣಬಹುದು . ಇಂತಹ ಸಮಯದಲ್ಲಿ ನಮ್ಮ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಯಾರ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳದೆ ಎರಡು ಪಕ್ಷಗಳ ಜಂಟಿ ಹೋರಾಟದ ನಡುವೆಯೂ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ . ಇದರಿಂದ ನಮ್ಮ ಕಾರ್ಯಕರ್ತರ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ನಾವು ಕಾಣಬಹುದು .ಕಳೆದ ವಾರ ನಡೆದ ಪ್ರಾಥಮಿಕ ಸಹಕಾರ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ಪರಾಭವಗೊಂಡಿಲ್ಲ ಕೆಲವು ಸ್ಥಾನವನ್ನು ಗೆದ್ದು ಬದಲಾಗಿ ಸ್ವಾಭಿಮಾನದ. ಸಾಮರ್ಥ್ಯವನ್ನು ತೋರಿಸಿದ್ದೇವೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ನಮ್ಮ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬರುವ ಗ್ರಾಮ ಪಂಚಾಯಿತಿ, ತಾಪಂ, ಜಿಪಂ ಚುನಾವಣೆಗಳಲ್ಲಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಾವು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಪಿಜಿ ಪಾಳ್ಯ ಗ್ರಾಮದ ಮುಖಂಡರಾದ ಶಿವಸ್ವಾಮಿ ಮಾತನಾಡಿ ನಮ್ಮ ನಾಯಕರಾದ ನೀಶಾಂತ್ ರವರ ಕೈ ಬಲಪಡಿಸಲು ನಾವುಗಳು ಒಗ್ಗೂಡಿ ಕೆಲಸ ಮಾಡಬೇಕು , ಮುಂದಿನ ಚುನಾವಣೆಗಳಿಗೆ ಇದೇ ಗೆಲುವಿನ ಮೆಟ್ಟಿಲಾಗಬೇಕು. ಪ್ರತಿಯೊಬ್ಬರೂ ಬಿಜೆಪಿ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದರು.

ಸಮುದಾಯ ಭವನದಲ್ಲಿ
ನೂತನವಾಗಿ ಆರಿಸಿದ ನಿರ್ದೇಶಕರುಗಳಾದ ಬಸವರಾಜು, ಶಿವಕುಮಾರಸ್ವಾಮಿ, ಮಹದೇವಸ್ವಾಮಿ, ರಾಜಮ್ಮ ರವರುಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪಾಳ್ಯ ಸಿದ್ದಪ್ಪಾಜಿ ,
ಸದಾಶಿವಸ್ವಾಮಿ, ಸದಾನಂದಮೂರ್ತಿ, ಶಿವಸ್ವಾಮಿ, ಕುಮಾರ್, ಮಧು, ಪ್ರಸಾದ್, ಪಾಲಾಕ್ಷ, ಮಾದಪ್ಪ, ಪರಶಿವಮೂರ್ತಿ, ಸಿದ್ದಲಿಂಗಸ್ವಾಮಿ, ಮಹದೇವ ಪ್ರಭು, ಪ್ರಭುಸ್ವಾಮಿ, ಗುರುಸ್ವಾಮಿ, ಸಿದ್ದಪ್ಪಾಜಿ, ಬಸವರಾಜು, ಶಿವಮಲ್ಲು, ಪ್ರಭುದಾಸ್, ಕಾಮಗೆರೆ ಸುರೇಶ್, ರಾಜು ಲೊಕ್ಕನಹಳ್ಳಿ, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಹಾಜರಿದ್ದರು.

Share This Article