ಪರಿಶಿಷ್ಟ ಜನಾಂಗದ ಬೀದಿಯಲ್ಲಿ 2 ನೇ ವರ್ಷದ ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯ ಕೊಂಡೋತ್ಸವ  ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Bangarappa c journalist
Bangarappa c journalist - Journalist
1 Min Read

ಪರಿಶಿಷ್ಟ ಜನಾಂಗದ ಬೀದಿಯಲ್ಲಿ 2 ನೇ ವರ್ಷದ ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯ ಕೊಂಡೋತ್ಸವ  ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕೊಳ್ಳೇಗಾಲ. ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಯಲ್ಲಿ 2 ನೇ ವರ್ಷದ ಕುರುಬನಕಟ್ಟೆ ಸಿದ್ದಪ್ಪಾಜಿ ಕಂಡಾಯಗಳ ಕೊಂಡೋತ್ಸವ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಬೆಳಿಗ್ಗೆ 7.15 ರಲ್ಲಿ ಕುರುಬನಕಟ್ಟೆ ಕ್ಷೇತ್ರದ ಶ್ರೀ.ಬಿ.ಎಸ್.ವರುಣಲಿಂಗರಾಜೇಅರಸ್ ನೇತೃತ್ವದಲ್ಲಿ ಸಿದ್ದಯ್ಯನಪುರ ಗ್ರಾಮದ ಕೊಂಡದ ಮಾಳದಲ್ಲಿ ಹಾಕಲಾಗಿದ್ದ ಕೊಂಡವನ್ನು ಸಿದ್ದಪ್ಪಾಜಿ ಕಂಡಾಯಗಳು, ಬ್ರಹ್ಮೇಶ್ವರ ಮತ್ತು ಬಸವೇಶ್ವರ ಸತ್ತಿಗೆಗಳನ್ನು ಗುಡ್ಡಪ್ಪದಿರು ಹೊತ್ತು ಹಾಯ್ದರು.
ಗ್ರಾಮದ ಹೊರವಲಯದ ಬ್ರಹ್ಮೇಶ್ವರ ದೇವಸ್ಥಾನದಿಂದ ಕಂಡಾಯಗಳು ಹಾಗೂ ಸತ್ತಿಗೆಗಳಿಗೆ ಹೂ-ಹೊಂಬಾಳೆ ಧರಿಸಿ ತಮಟೆ ಶದ್ದಿನೊಂದಿಗೆ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಕೊಂಡೋತ್ಸವ ನಡೆಯಿತು. ನಂತರ ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಯ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಕಂಡಾಯಗಳನ್ನು ಇರಿಸಿ ಪೂಜೆ ಸಲ್ಲಿಸಿದರು.
ಕೊಂಡೋತ್ಸವ ಹಿನ್ನಲ್ಲೆ ಗ್ರಾಮದಲ್ಲಿ ಹಸಿರು ತೋರಣ, ವಿದ್ಯುತ್ ದೀಪಾಂಲಕರ ಮತ್ತು ರಂಗೋಲಿ ಬಿಡಿಸಿ ಅಲಂಕೃತಗೊಳಿಸಿದರು.
ಇಂದು ಮಧ್ಯಾಹ್ನ ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ನಡೆಸುವ ವೇಳೆ ಪ್ರತಿ ಮನೆಗಳಿಂದ ಹಣ್ಣು ಕಾಯಿ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು.
ಗುರುವಾರ ಸಂಜೆ ಬೊಪ್ಪೆಗೌಡನಪುರ ಮಂಟೈಸ್ವಾಮಿ ಸಂಸ್ಥಾಪನದ ಮಠದ ಶ್ರೀ. ಜ್ಞಾನನಂದ ರಾಜೇ ಅರಸ್ ಹಾಗೂ ಕುರುಬನಕಟ್ಟೆ ಕ್ಷೇತ್ರದ ಶ್ರೀ.ಬಿ.ಎಸ್. ವರುಣಲಿಂಗ ರಾಜೇ ಅರಸ್ ರವರಿಂದ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಉಪಸ್ಥಿತರಿದ್ದ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರು ಸಹಾ ಸಿದ್ದಪ್ಪಾಜಿ ದೇವಸ್ಥಾನಕ್ಕೆ ತೆರಳಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೊಡ್ಡ ಯಜಮಾನ ಚಾಮರಾಜು, ಯಜಮಾನರಾದ ಲಕ್ಷ್ಮಣ್‌ಮೂರ್ತಿ, ಮಹೇಂದ್ರ, ಶ್ರೀನಿವಾಸ್, ಪುಟ್ಟರಾಜು, ನಾಗರಾಜು, ಪುಟ್ಟಸ್ವಾಮಿ, ಪುಟ್ಟನಂಜ, ನಂಜುಂಡ, ಮಹದೇವ, ಮುರುಳಿ, ಶಶಿಕುಮಾರ್, ಚಿಕ್ಕಬಸವಯ್ಯ, ನಿವೃತ್ತ ಯೋಧ ಲಿಂಗರಾಜು(ತಂಬಡಿ) ಹಾಗೂ ಲಿಂಗಣಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಉಪಸ್ಥಿತರಿದ್ದರು.

Share This Article