ಪಿಜಿಪಾಳ್ಯದೊಡ್ಡಕೆರೆ ಅಭಿವೃದ್ಧಿ ಹೆಸರಲ್ಲಿ ಶಾಸಕರ ಬೆಂಬಲಿಗರಿಂದ ಮಣ್ಣು ಮಾರಿ ಭ್ರಷ್ಟಾಚಾರಕ್ಕೆ ಮಣೆ : ನೀಶಾಂತ್ ಬೆಂಬಲಿಗರ ಆರೋಪ

ಹನೂರು: ಕ್ಷೇತ್ರ ವ್ಯಾಪ್ತಿಯ ಪಿ.ಜಿ.ಪಾಳ್ಯ ಗ್ರಾಮದ ದೊಡ್ಡಕೆರೆಯ ಮಣ್ಣನ್ನು ಅಭಿವೃದ್ಧಿ ಹೆಸರಿನಲ್ಲಿ ಶಾಸಕರ ಬೆಂಬಲಿಗರು ಕೂಲಿ ಕೆಲಸಕ್ಕೆ ಬಂದಿರುವ ರೈತರಿಗೆ ಮಾರಾಟ ಮಾಡಿ ಹಣ ಪಡೆದಿದ್ದು ಬೇಲಿಯೆ ಎದ್ದು ಹೋಲ ಮೆಯುವಂತೆ ಮಾಡಲಾಗಿದೆ ಇಂದು ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ಬಿಜೆಪಿ ಮುಖಂಡರಾದ ನಿಶಾಂತ್ ಆರೋಪಿಸಿದರು.
ಹನೂರು ಕ್ಷೇತ್ರದ ಶಾಸಕರಾದ ಎಮ್ ಆರ್ ಮಂಜುನಾಥ್ ರೈತರ ಜೊತೆಯಲ್ಲಿ ನಾವಿದ್ದೆವೆ ಎಂದು ಹೆಳುತ್ತ
ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿನ ದೊಡ್ಡ ಕೆರೆಯ ಕಾಮಗಾರಿಯನ್ನು ಅವೈ ಜ್ಞಾನಿಕವಾಗಿ ಮಾಡಲಾಗಿದೆ , ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಮಾತ ನಾಡಿದ ಅವರು, ಪಿ.ಜಿ.ಪಾಳ್ಯ ದೊಡ್ಡಕೆರೆಯನ್ನು ಶಾಸಕರು ಅಭಿವೃದ್ಧಿ ಮಾಡುತ್ತಿರುವುದು ಸ್ವಾಗ ತಾರ್ಹ. ಆದರೆ ಕಾಮಗಾರಿಯನ್ನು ಪೂರ್ಣ ಗೊಳಿಸದೆ, ಕೇವಲ ಕಾಟಾಚಾರಕ್ಕೆ ಹೂಳು ತೆಗೆಸಿ, ತಡೆಗೋಡೆ ನಿರ್ಮಾಣ ಮಾಡದೆ ನೀರು ತುಂಬಿಸುತ್ತಿರುವುದು ಸರಿಯಲ್ಲ.
ಕೆರೆ ಅಭಿವೃದ್ಧಿ ಮಾಡುವಾಗ ಕೋಡಿ ಬೀಳುವ ಪೈಪು ಜೋಡಣೆಯಲ್ಲಿ ವೈಜ್ಞಾನಿಕವಾಗಿಲ್ಲ ಎರಡು ಮಳೆ ಬಿದ್ದರೆ ಅಲ್ಲಿರುವ ರಸ್ತೆ ಸೇರಿದಂತೆ ಇವರು ಜೋಡಿಸಿರುವ ಪೈಪುಗಳು ಮಾಯವಾಗುತ್ತದೆ ಅಭಿವೃದ್ಧಿ ಹೆಸರಿನಲ್ಲಿ ಮಂಕುಬೂದಿ ಎರಚುವುದನ್ನು ಶಾಸಕರು ಕೈ ಬೀಡಬೇಕು ಎಂದರು .
ಶಾಸಕರ ಮೂವರು ಬೆಂಬಲಿಗರು ಕೆರೆಯ ಮಣ್ಣನ್ನು ಲಕ್ಷಾಂತರ ರೂ.ಗೆ ಮಾರಾಟ ಮಾಡಿದ್ದಾರೆ. ಇದು ನಿಮಗೆ ತಿಳಿದಿಲ್ಲವೇ? ಈ ಹಣದಲ್ಲಿ ನಿಮಗೂ ಪಾಲು ಇದೆಯೇ? ಎಂದು ಪ್ರಶ್ನಿಸಿದರು.
ಕಾಮಗಾರಿಗೆ ದುಡಿದ ಕೂಲಿ ಕಾರ್ಮಿಕರಿಗೆ,
ಟ್ರಾಕ್ಟರ್ ಮಾಲೀಕರಿಗೆ ಇದುವರೆಗೂ ಕೂಲಿ ನೀಡಿಲ್ಲ. ರೈತರಿಂದ ಪಡೆದ ಹಣದಲ್ಲಿ ಸರ್ಕಾರಕ್ಕೆ ಲಾಯಲ್ಟಿ ಕಟ್ಟಿ ಉಳಿದ ಹಣವನ್ನು ಒಂದು ವಾರದೊಳಗೆ ಹಿಂದಿರುಗಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಿಮ್ಮ ಅವಧಿಯಲ್ಲಿ ಚಾಲನೆ ನೀಡಿರುವ ರಸ್ತೆ ಕಾಮಗಾರಿಗಳೆಲ್ಲ ಅಪೂರ್ಣಗೊಂಡಿವೆ. ಬಂಡಳ್ಳಿ ರಸ್ತೆ, ನಾಲ್ ರೋಡ್ ರಸ್ತೆ, ಚಿಕ್ಕಲೂರು ರಸ್ತೆಗೆ ಅನುದಾನವಿಲ್ಲದೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.ರೈತ ಮುಖಂಡ
ಮಹದೇವಪ್ರಭು ಮಾತನಾಡಿ, ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವವರಿಗೆ ನಮ್ಮ ಸಹಕಾರ ಇದ್ದೇ ಇರುತ್ತದೆ ಆದರೆ ನಿಮ್ಮ ಬೆಂಬಲಿಗರು ನ್ಯಾಯ ಕೇಳುವವರನ್ನು ಬೀಡುವುದಿಲ್ಲ ನಮಗೆ ನ್ಯಾಯ ಸಿಗಬೇಕು ಎಂದರು.
ರೈತ ಮುಖಂಡರಾದ
ಶಿವಸ್ವಾಮಿ ಮಾತನಾಡಿ ದೊಡ್ಡ ಕೆರೆಗೆ ತನ್ನದೆ ಆದ ಇತಿಹಾಸವಿದೆ ವಾಸ್ತುಪ್ರಕಾರವಿದ್ದ ಕೆರೆಯನ್ನು ಹಾಳುಮಾಡಿ ನಂತರ ಅರ್ದ ಕಾಮಗಾರಿಮಾಡಿ ಕೆರೆಯ ಮಣ್ಣನ್ನು ಮಾರಿ ಕೆರೆಯ ಅಭಿವೃದ್ಧಿ ಮಾಡುತ್ತಿರುವುದು ವಿಪರ್ಯಾಸ ನಂತರ ಜಲಾಶಯಕ್ಕೆ ಇಲ್ಲಿನ ಕಾಡುಗಳಿಗೆ ಬಿದ್ದ ಮಳೆಯಿಂದ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು ಆದರೆ ಅದನ್ನು ಸಹ ತಡೆಯಿಡಿಯಲಾಗಿದೆ ಅದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ತೊಂದರೆಯಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ
ಶಿವಕುಮಾರ್, ಪರಶಿವಮೂರ್ತಿ, ಶಾಂತಪ್ಪ, ಗುರುಸಿದ್ದಪ್ಪ, ಸಿದ್ದರಾಜು, ಸಿದ್ದಲಿಂಗಸ್ವಾಮಿ, ಮಧು, ಶಿವಸ್ವಾಮಿ (ಮಾಸ್ಟರ್), ಕುಮಾರ್ (ಎಸ್.ವಿ.ಟಿ.), ಮಧು (ಡಿ.ಜಿ.ಎಸ್.), ಪ್ರಸಾದ್, ಮಾದಪ್ಪ, ಶಿವಸ್ವಾಮಿ (ಡಿ.ಸಿ.), ಪ್ರಭುಸ್ವಾಮಿ, ಗುರುಸ್ವಾಮಿ, ಸಿದ್ದಪ್ಪಾಜಿ, ಬಸವರಾಜು, ಶಿವಮಲ್ಲು, ಪ್ರಭುದಾಸ್, ರಾಜು ಲೊಕ್ಕನಹಳ್ಳಿ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
