ಮಾಜಿ ಸಿಎಮ್ ಜಗದೀಶ್ ಶೆಟ್ಟರ್. ನಿ ,ನ್ಯಾಯಮೂರ್ತಿ ಡಾ ಸಂತೋಷ ಹೆಗಡೆ ಸೇರಿದಂತೆ ಹಲವರಿಗೆ ಮಾನಸತೋತ್ಸವಕ್ಕೆ ಆಹ್ವಾನ : ಡಾಕ್ಟರ್ ದತ್ತೇಶ್ ಕುಮಾರ್ .

Bangarappa c journalist
Bangarappa c journalist - Journalist
2 Min Read

ಮಾಜಿ ಸಿಎಮ್ ಜಗದೀಶ್ ಶೆಟ್ಟರ್. ನಿ ,ನ್ಯಾಯಮೂರ್ತಿ ಡಾ ಸಂತೋಷ ಹೆಗಡೆ ಸೇರಿದಂತೆ ಹಲವರಿಗೆ ಮಾನಸತೋತ್ಸವಕ್ಕೆ ಆಹ್ವಾನ : ಡಾಕ್ಟರ್ ದತ್ತೇಶ್ ಕುಮಾರ್ .

ಪಟ್ಟಣದ ಮಾನಸೋತ್ಸವ ಉದ್ಘಾಟನೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾನಸ ಪ್ರಶಸ್ತಿ ನ್ಯಾಯಮೂರ್ತಿಡಾ. ಎನ್ ಸಂತೋಷ್ ಹೆಗಡೆವರಿಗೆ ಆಹ್ವಾನ.
ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ನವಂಬರ್ 20, 21, 22, 3 ದಿನಗಳು ನಡೆಯುವ 2026ರ ಮಾನಸ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ವನ್ನು ಹಾಲಿ ಸಂಸದರು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಉದ್ಘಾಟನೆ ಮಾಡಲಿದ್ದು ಸಾನಿಧ್ಯವನ್ನು ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಮೈಸೂರು ಧರ್ಮ ಪ್ರಾಂತ್ಯ ಅತಿ ವಂದನೆಯ ಡಾ. ಫ್ರಾನ್ಸಿಸ್ ಸೆರಾವು ಬಿಷಪ್ ವಹಿಸಲಿದ್ದಾರೆ ಈ ವರ್ಷದ ಸಿದ್ದೇಗೌಡ ಲಿಂಗಮ್ಮ ಸ್ಮರಣಾರ್ಥ ಮಾನಸ ಪ್ರಶಸ್ತಿ ಯನ್ನು ವಿಶ್ರಾಂತ ನ್ಯಾಯಮೂರ್ತಿಗಳು ಸರ್ವೋಚ್ಚ ನ್ಯಾಯಾಲಯ ಹಾಗೂ ವಿಶ್ರಾಂತ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಡಾ ಶ್ರೀ ಎನ್ ಸಂತೋಷ್ ಹೆಗಡೆಯವರಿಗೆ ಪ್ರಧಾನ ಮಾಡಲಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಡಾ ದತ್ತೇಶ್ ಕುಮಾರ್ ಮಾತನಾಡಿ ಮೂರು ದಿನಗಳು ನಡೆಯುವ ಮಾನಸೋತ್ಸವ ಕಾರ್ಯಕ್ರಮದ ಮೊದಲ ದಿನ ನ.20 ರಂದು ಕ್ಯಾತ ಸಾಹಿತಿಗಳು ಸಂಶೋಧಕರಾದ ಡಾ.ಅಂ ಪ ನಾಗರಾಜಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂಜೆ ನಿಸರ್ಗ ವಿದ್ಯಾನಿಕೇತನ ಶಾಲೆ ವಾರ್ಷಿಕೋತ್ಸವ ಸಾನಿಧ್ಯ ಶ್ರೀ ಮನೋರಕಿತ ಬಂತೇಜಿ ಸಂಜೆ ಮೈಸೂರಿನಅಮ್ಮ ರಾಮಚಂದ್ರ ಮತ್ತು ತಂಡ ಇವರಿಂದ ಸಂಗೀತ ಸಂಜೆ.
ಇದೇ ರೀತಿ 21 ಗುರುವಂದನ ಕಾರ್ಯಕ್ರಮ ಮತ್ತು ಕ್ರೀಡಾ ಸಾಧಕರಿಗೆ ಸನ್ಮಾನ ಸಂಜೆ ಮೈಸೂರಿನಜಿ ಪಿ ಐ ಆರ್ ತಂಡದಿಂದ ಮಂಟೆಸ್ವಾಮಿ ಕಥಾಪ್ರಸಂಗ 22 ರಂದು ಪ್ರತಿಭಾ ಪುರಸ್ಕಾರ ಮತ್ತು ರಾಂಕ್ ವಿಜೇತರಿಗೆ ಸನ್ಮಾನ ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮಗಳು ನಡೆಯಲಿವೆ. ಈ ಸಂದರ್ಭದಲ್ಲಿ ವಿವಿಧ ರಂಗದಲ್ಲಿ ಸಾಧನೆ ಮಾಡಿದ 12 ಸಾಧಕರಿಗೆ ಗೌರವ ಸಮರ್ಪಣೆ ಹಾಗೂ ಕಾಲೇಜಿನ 408 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮುಂತಾದ ಹಲವಾರು ವಿದ್ಯಾರ್ಥಿಗಳಿಂದ ಸಂಗೀತಗಾರರಿಂದ ಮೂರು ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಯದರ್ಶಿ ಧತೇಶ್ ಕುಮಾರ್ ತಿಳಿಸಿದ್ದಾರೆ.

Share This Article